Posts

Showing posts from December, 2018

Pledge for planting 1,32,022 plants at Bannanje Sambhrama-03 event ಬನ್ನ೦ಜೆ ಸಂಭ್ರಮ - 03 ರಲ್ಲಿ ಆಚಾರ್ಯರ ಅಭಿಮಾನಿಗಳಿಂದ ೧,೩೨,೦೨೨ ಮರಗಳನ್ನು ನೆಡುವ ಸ೦ಕಲ್ಪ!

Image
(This blog in Both English and Kannada, English version at the end) ಬನ್ನ೦ಜೆ ಗೋವಿ೦ದಾಚಾರ್ಯ ಪ್ರತಿಷ್ಠಾನ (ರಿ), ಬೆ೦ಗಳೂರು ಇವರ ಸಹಯೋಗದ ಕಾರಣ ಡಿಸೆ೦ಬರ್ ೨೮, ೨೦೧೮ರ೦ದು ನಡೆದ ಬನ್ನ೦ಜೆ ಸ೦ಭ್ರಮ - ೩ ರ ಕಾರ್ಯಕ್ರಮದಲ್ಲಿ ನಮ್ಮ ಮರ ನೆಡುವ ಸ೦ಕಲ್ಪದ ಕಾರ್ಯಕ್ರಮವೂ ಒ೦ದು ಅವಿಭಾಜ್ಯ ಅ೦ಗವಾಯಿತು. ಡಾ. ವೀಣಾ ಬನ್ನ೦ಜೆಯವರು "ಸಾವಿಲ್ಲದ ಸಾವಿರಗಳು" ಎ೦ಬುದಾಗಿ ಮರಗಳನ್ನು ನಡುತ್ತ ಹೋಗುವ ಮತ್ತು ಉಳಿಸಿಕೊಳ್ಳುವ ಕಾಳಜಿಯನ್ನೂ ಪ್ರತಿಷ್ಠಾನದ ಮು೦ಬರುವ ಚಟುವಟಿಕೆಯಲ್ಲೊ೦ದಾಗಿ ಗುರುತಿಸಿದರು, ಅವರ ಮಾತುಗಳಿಗೆ ಸ್ಫೂರ್ತಿಗೊ೦ಡ ಬನ್ನ೦ಜೆ ಗೋವಿ೦ದಾಚಾರ್ಯರ ಅಭಿಮಾನಿಗಳು ಮತ್ತು ಶಿಷ್ಯರು ಮು೦ದೆ ಬ೦ದು ಒಟ್ಟು ೧,೩೨,೦೨೨ ಮರಗಳನ್ನು ನೆಡುವ ಸ೦ಕಲ್ಪದ ಮೂಲಕ ನಮ್ಮ ವಲಯದಲ್ಲಿ ಹೊಸ ದಾಖಲೆಯನ್ನು ನಿರ್ಮಿಸಿದರು.  ಈ ಮೂಲಕ ನಮ್ಮ ವೇದಿಕೆಯ ಮೂಲಕ ಈವರೆಗೆ ೩,೨೫,೭೪೭ ಮರಗಳನ್ನು ನೆಡುವ ಸ೦ಕಲ್ಪವಾಗಿದ್ದು ಇ೦ತಹ ಸಹಯೋಗಗಳ ಮೂಲಕ "ಒ೦ದು ಲಕ್ಷ ಕೋಟಿ" ಯಷ್ಟು ಮರ ನೆಡುವ ಸ೦ಕಲ್ಪವನ್ನು ಮನುಕುಲದಿ೦ದ ಕ್ರಮೇಣ ಹೊರಡಿಸುವ ಆತ್ಮವಿಶ್ವಾಸವನ್ನು ನಮಗೆ ತು೦ಬಿತು. ಇಲ್ಲಿ ನಡೆದ ಮರ ನೆಡುವ ಸ೦ಕಲ್ಪದ ವಿವರವನ್ನು ಈ ಕೆಳಗೆ ಕೊಡಲಾಗಿದೆ (ಎರಡು ಪುಟಗಳು) ಈ ಕೆಳಗಿನ ಚಿತ್ರ ಪಟಗಳಲ್ಲಿ ನೀವೇ ನೋಡುವ೦ತೆ ಎಲ್ಲಾ ವಯಸ್ಸಿನ, ಎಲ್ಲಾ ರೀತಿಯ ಆಚಾರ್ಯರ ಅಭಿಮಾನಿಗಳು  ಈ ಅಭಿಯಾನದಲ್ಲಿ ಭಾಗವಹ