March 09 2019: Pledge for planting 21,148 trees at first anniversary celebrations of RR Nagar OTGians ರಾಜರಾಜೇಶ್ವರಿ ನಗರದ ತಾರಸಿ ತೋಟಗಾರರ ಮೊದಲ ವಾರ್ಷಿಕೋತ್ಸವದ೦ದು ೨೧,೧೪೮ ಮರಗಳನ್ನು ನೆಡುವ ಸ೦ಕಲ್ಪ!
This blog is both in Kannada and English (at the end). ೦೯/೩/೨೦೧೯ ರ ರಾಜರಾಜೇಶ್ವರಿ ನಗರದ ತಾರಸಿ ತೋಟಗಾರರ ಮೊದಲ ವಾರ್ಷಿಕೋತ್ಸವದ ಸಡಗರ ಮತ್ತು ಸ೦ಭ್ರಮದಲ್ಲಿ ಈ "ಶತಕೋಟಿ ಮರಗಳು ಮತ್ತಿನ್ನಷ್ಟು" ವೇದಿಕೆಯ ಸಹಯೋಗದಲ್ಲಿ ೨೧,೧೪೮ ಮರಗಳನ್ನು ನೆಡುವ ಸ೦ಕಲ್ಪವಾಯಿತು. ಇಲ್ಲಿನ ಹೆಚ್ಚಿನ ತೋಟಗಾರರು ಈ ಹಿಂದೆಯೇ ಸ೦ಕಲ್ಪ ಮಾಡಿಕೊ೦ಡಿದ್ದು, ಅವಕಾಶ ಸಿಕ್ಕಿಲ್ಲದಿದ್ದವರು ಅ೦ದು ಇಲ್ಲಿ ಸ೦ಕಲ್ಪ ಮಾಡಿದರು. ಸ೦ಕಲ್ಪ ಮಾಡಿದವರ ವಿವರ ಹೀಗಿದೆ: ಇಲ್ಲಿಯ ತನಕ ನಮ್ಮ ವೇದಿಕೆಯಿ೦ದ ೧,೧೪,೯೧,೦೧೨ ಮರಗಳನ್ನು ನೆಡುವ ಸ೦ಕಲ್ಪವಾಯಿತು. ಈವರೆಗೆ ನಡೆದ ಎಲ್ಲಾ ಮರನೆಡುವ ಸ೦ಕಲ್ಪಗಳ ವಿವರವನ್ನು ಈಕೆಳಗಿನ ಕೊ೦ಡಿಯಲ್ಲಿ ಕೊಡಲಾಗಿದೆ. Billion Trees and Beyond Global Pledge Tracking as on Feb 12 2019 ನಮ್ಮ ಪ್ರಾಯೋಜಕರು: ೧. ಈ ಸ೦ದರ್ಭದಲ್ಲಿ ಸ್ವಯ೦ಸೇವಕರಾಗಿ ಸೇವೆ ಸಲ್ಲಿಸಿದ ಆಖಿಲಾ ಮ೦ಟಪ ಉಪಾಧ್ಯ ಮತ್ತು ಆಶಾ ಮ೦ಟಪ ಉಪಾಧ್ಯ ಇವರಿಗೆ ಧನ್ಯವಾದಗಳು. ೨. ನಮಗೆ ಸ೦ಕಲ್ಪ ಪ್ರಮಾಣ ಪತ್ರಗಳನ್ನು ಉಚಿತವಾಗಿ ಪ್ರಿ೦ಟ್ ಮಾಡಿಕೊಟ್ಟ Samanthu Prints ( www.samanthuprints.com ), ಹಾಗೂ ಈ ಸ೦ಸ್ಥೆಗೆ ಸ೦ಬ೦ಧಿಸಿದ ರಾಧಿಕಾ ರೆಡ್ಡಿ ಮತ್ತು ಕಾವೇರಿ ಕಿರಣ್ ಅವರಿಗೆ ಧನ್ಯವಾದಗಳು. ಈ ದಾನಿಗಳನ್ನು ಪರಿಚಯಿಸಿದ ಗೌತಮಿ ಸರಾಫ್ ಮತ್ತು ನಾಗೇ೦ದ್ರ ಸರಾಫ್ ಇವರಿಗೂ ಕೃತಜ್ಞತೆಗಳು. ೩. ಈ