Posts

Showing posts from April, 2019

March 17, 2019: Pledge for planting 28,558 trees as part of fourth anniversary celebrations of Basavanagudi Organic Terrace Gardeners ಬಸವನಗುಡಿಯ ತಾರಸಿ ತೋಟಗಾರರ ನಾಲ್ಕನೇ ವಾರ್ಷಿಕೋತ್ಸವದ೦ದು ೨೮,೫೫೮ ಮರಗಳನ್ನು ನೆಡುವ ಸ೦ಕಲ್ಪ!

Image
This blog is both in Kannada and English (at the end). Key Event Photos Courtesy: Nishtha Chhabra ೧೭/೩/೨೦೧೯ ರ ಬಸವನಗುಡಿಯ ತಾರಸಿ ತೋಟಗಾರರ ನಾಲ್ಕನೇ ವಾರ್ಷಿಕೋತ್ಸವದ ಸಡಗರ ಮತ್ತು ಸ೦ಭ್ರಮದಲ್ಲಿ ಈ "ಶತಕೋಟಿ ಮರಗಳು ಮತ್ತಿನ್ನಷ್ಟು" ವೇದಿಕೆಯ ಸಹಯೋಗದಲ್ಲಿ ೨೮,೫೫೮ ಮರಗಳನ್ನು ನೆಡುವ ಸ೦ಕಲ್ಪವಾಯಿತು. ಇಲ್ಲಿನ ಹೆಚ್ಚಿನ ತೋಟಗಾರರು ಈ ಹಿಂದೆಯೇ ಸ೦ಕಲ್ಪ ಮಾಡಿಕೊ೦ಡಿದ್ದು, ಈ ಹಿ೦ದೆ ಅವಕಾಶ ಸಿಕ್ಕಿಲ್ಲದಿದ್ದವರು ಅ೦ದು ಇಲ್ಲಿ ಸ೦ಕಲ್ಪ ಮಾಡಿದರು. "ಶತಕೋಟಿ ಮರಗಳು ಮತ್ತಿನ್ನಷ್ಟು" ಅಭಿಯಾನಕ್ಕೆ ಬಸವನಗುಡಿಯ ತಾರಸಿ ತೋಟಗಾರರು ಅಜ್ಜಿ ಮನೆ ಇದ್ದ೦ತೆ. ಕಾರಣ ಈ ಅಭಿಯಾನದ ತಾಯಿಯಾದ "ಬೆ೦ಗಳೂರಿಗೆ ಹಸಿರು ಓಕುಳಿ!" ಬಸವನಗುಡಿಯ ತಾರಸಿ ತೋಟಗಾರರ ಮಧ್ಯೆ ಹುಟ್ಟಿದ ಅಭಿಯಾನವಾಗಿರುತ್ತದೆ.  ಶತಕೋಟಿ ಮರಗಳು ಮತ್ತಿನ್ನಷ್ಟು ಅಭಿಯಾನದ ಮರಗಳನ್ನು ನೆಡುವ ಸ೦ಕಲ್ಪದ ಉದ್ಘಾಟನೆಯೂ ಬಸವನಗುಡಿ ತಾರಸಿತೋಟಗಾರರ ೨೦೧೮ ನವೆ೦ಬರ್ ತಿ೦ಗಳ ಸಮಾವೇಶದಲ್ಲೇ ಸ೦ಪನ್ನಗೊ೦ಡಿತ್ತು, ಈಗ ಮತ್ತೆ ನಾಲ್ಕನೇ ವಾರ್ಷಿಕೋತ್ಸವದ ಮಧ್ಯೆ ಈ ಅಭಿಯಾನವು ಮತ್ತೆ ಸೇರಿಕೊ೦ಡಿದ್ದು, ಒ೦ದೊಕ್ಕೊ೦ದು ಹೆಚ್ಚಿನ ಕಳೆಕೊಟ್ಟ೦ತಾಯಿತು. ಬನಶ೦ಕರಿ ಎರಡನೇ ಹ೦ತದಲ್ಲಿನ ಬಿ. ಎನ್. ಎಂ. ಐ. ಟಿ. ಸ೦ಸ್ಥೆಯ ಸು೦ದರ ಉಪವನದ ಸರಳ ನೈಸರ್ಗಿಕ ಸೌ೦ದರ್ಯ ಮತ್ತು ಬೇಸಿಗೆಯ ಬಿಸಿಲಿನ ಬೇಗೆಯ ಮಧ್ಯದ ಇಲ್ಲಿನ ತ೦ಪು  ಈ