Posts

Showing posts from November, 2019

ಆಗಸ್ಟ್‌ ೨೫, ೨೦೧೯ರಂದು ಶಾಲಿನಿ ಮೈದಾನ, ಜಯನಗರ, ಬೆಂಗಳೂರಿನಲ್ಲಿ ನಡೆದ ೩೧ನೇ ಊಟ ಫ್ರಾಮ್ ಯುವರ್‌ ತೋಟ (OFYT) ಮೇಳದಲ್ಲಿ ೩,೪೮,೮೩೦ ಮರಗಳನ್ನು ನೆಡುವ ಸಂಕಲ್ಪ; 31st Ooota From Your Thota (OFYT) event @ Shalini grounds, Jayanagar, Bengaluru raises pledges for planting 3,48,830 trees

Image
This blog is both in Kannada & English(at the end). Photo Courtesy: OFYT FB Page:  https://www.facebook.com/ofyt.org/ ಆಗಸ್ಟ್‌ ೨೫, ೨೦೧೯ ಭಾನುವಾರ ಬೆಂಗಳೂರು ಜಯನಗರದ ಶಾಲಿನಿ ಮೈದಾನದಲ್ಲಿ ದಿನವಿಡೀ ಹಬ್ಬದ ವಾತಾವರಣವಿತ್ತು, ೩೧ನೇ ಊಟ ಫ್ರಾಮ್‌ ಯುವರ್‌ ತೋಟ  ಎಂಬ ಹೆಸರಿನ ನಗರ ಕೃಷಿಮೇಳವನ್ನು ಗಾರ್ಡನ್‌ ಸಿಟಿ ಫಾರ್ಮರ್ಸ್‌ ಎಂಬ ಪ್ರತಿಷ್ಟಾನವು ಏರ್ಪಡಿಸಿದ್ದು ನಮ್ಮ  ಅಭಿಯಾನಕ್ಕೆ ಸದಾ ಪೋಷಕರಾದ  ಸಂಘಟಕರ ಪ್ರೋತ್ಸಾಹವಿದ್ದು, ಮರಗಳನ್ನು ನೆಡುವ ಸಂಕಲ್ಪವನ್ನು ಹೊರಡಿಸಲು ನಮಗೆ ಉಚಿತ ಅವಕಾಶವಿತ್ತು. ನಿಸರ್ಗಪ್ರಿಯ ನಾಗರಿಕರು ನಮ್ಮ ವೇದಿಕೆಯಲ್ಲಿ ಒಟ್ಟು ೩,೪೮,೮೩೦ ಮರಗಳನ್ನು ನೆಡುವ ಸಂಕಲ್ಪ ಮಾಡಿದರು. ಇದೇ ಭಾನುವಾರ, ಅಂದರೆ ೨೪ ನವೆಂಬರ ೨೦೧೯ರಂದು ಇದೇ ೩೨ನೇ ನಗರಕೃಷಿಮೇಳವಿದ್ದು ಈ ಮೇಳವು ಇನ್ನೂ ಅದ್ದೂರಿಯಾಗಿ ನಡೆಯುವಂತೆ ಕುಟುಂಬ ಮತ್ತು ಸ್ನೇಹಸಂಕುಲಗಳನ್ನು ಸೇರಿಕೊಂಡು ಬನ್ನಿರಿ, ಈವರೆಗೆ ಸಂಕಲ್ಪ ಮಾಡಲು ಸಾಧ್ಯವಾಗದವರು ನಮ್ಮ ವೇದಿಕೆಯನ್ನು ಹುಡುಕಿ ಬಂದು ನಮ್ಮನ್ನು ಭೇಟಿಯಾಗಿರಿ, ಹಾಗೂ ನೂರಾರು ಮರಗೊಂಡೆಹೂವಿನ ಮರವಾಗುವಂತ ಕಾಂಡಗಳು ನಾವು ಉಚಿತವಾಗಿ ಕೊಡುತ್ತಿದ್ದು, ಅವು ಖಾಲಿಯಾಗುವ ಮುನ್ನವೇ ಬನ್ನಿರಿ. ಅ೦ದು ಸ೦ಕಲ್ಪ ಮಾಡಿದವರ ವಿವರವನ್ನು ಕಳಗೆ ಕೊಡಲಾಗಿದೆ ಇಲ್ಲಿಯ ತನಕ ನಮ್ಮ ವೇದಿಕೆಯಿ೦ದ ೧,೨೪,೧೫,೯೧೯ ಮರಗಳನ್ನು ನೆಡುವ ಸ೦ಕಲ್ಪವಾಯಿತು. ಈವರ