Posts

Showing posts from December, 2019

ನವೆಂಬರ ೨೪, ೨೦೧೯ರಂದು ಬೆಂಗಳೂರಿನ ವಿಶೇಷ ಚೇತನದವರ ಸಂಘದಲ್ಲಿ ನಡೆದ ೩೨ನೇ ಊಟ ಫ್ರಾಮ್‌ ಯುವರ್‌ ತೋಟ ಸಮಾವೇಶದಲ್ಲಿ ೨,೧೧,೧೬೫ ಮರಗಳನ್ನು ನೆಡುವ ಸಂಕಲ್ಪ OFYT 32 held on Nov 24, 2019 @ The Association for Physically Disabled (APD), Bengaluru raises pledges for 2,11,165 trees

Image
This blog is both in Kannada and English, English version is given later. ನವೆಂಬರ್ ೨೪ರ ಭಾನುವಾರ ಜೀವನ ಭೀಮಾ ನಗರದ ವಿಶೇಷಚೇತನರ ಸಂಘದಾವರಣದಲ್ಲಿ ಹಬ್ಬದ ವಾತಾವರಣವಿತ್ತು. ಅವರು ಹಾಕಿಕೊಂಡ ಗಿಡಗಳ ಮಾರಾಟದ ಸಂತೆಯ ಕೊನೆಯ ದಿನವಾಗಿದ್ದು ಅದರೊಂದಿಗೆ ಗಾರ್ಡನ್‌ ಸಿಟಿ ಫಾರ್ಮರ್ಸ್‌ ಪ್ರತಿಷ್ಟಾನದವರ ೩೨ನೇ ಊಟ ಫ್ರಾಂ ಯುವರ್‌ ತೋಟ ಎಂಬ ಹಬ್ಬವೂ ಇತ್ತು. ಈ ಹಬ್ಬದಲ್ಲಿ ಭಾಗವಹಿಸಲು ಸಂಘಟಕರಿಂದ ನಮಗೆ ಎಂದಿನಂತೆ ಆಹ್ವಾನವಿದ್ದು, ನಮ್ಮ ವೇದಿಕೆಯ ಮೂಲಕ ಒಟ್ಟು ೨,೧೧,೧೬೫ ಮರಗಳನ್ನು ನೆಡುವ ಸಂಕಲ್ಪವನ್ನು ಹುಟ್ಟಿಸಲಾಯಿತು. ಇದೇ ಡಿಸೆಂಬರ್‌ ೨೧ ಮತ್ತು ೨೨ ರಂದು ಹಳ್ಳಿಯ ಕಥೆ (Village Story) ತಂಡದವರ ಸಹಯೋಗದಲ್ಲಿ ೩೩ನೇ  ಊಟ ಫ್ರಾಂ ಯುವರ್‌ ತೋಟ ಹಬ್ಬವನ್ನು ಏರ್ಪಢಿಸಲಾಗಿದ್ದು ಆ ಕುರಿತಾದ ಮಾಹಿತಿಗಳನ್ನು ಕೆಳಗೆ ಕೊಡಲಾಗಿದೆ. ಬನ್ನಿ. ಮತ್ತೆ ನಮ್ಮ ವೇದಿಕೆಗೆ ಅವಕಾಶವಿದ್ದು ಮತ್ತಷ್ಟು ಮರಗಳನ್ನು ನೆಡುವ ಸಂಕಲ್ಪಕ್ಕೆ ಅವಕಾಶವಿದೆ.        Village Story Map Location given below: Village Story Map Location ನವೆಂಬರ್‌ ೨೪ರಂದು ನಮ್ಮೊಂದಿಗೆ ಸಂಕಲ್ಪ ಮಾಡಿದವರ ವಿವರವನ್ನು ಈಕೆಳಗೆ ಕೊಡಲಾಗಿದೆ. ಇಲ್ಲಿಯ ತನಕ ನಮ್ಮ ವೇದಿಕೆಯಿ೦ದ ೧,೨೬,೪೨,೩೧೩ ಮರಗಳನ್ನು ನೆಡುವ ಸ೦ಕಲ್ಪವಾಯಿತು. ಈವರೆಗೆ ನಡೆದ ಎಲ್ಲಾ ಮರನೆಡುವ ಸ೦ಕಲ್ಪಗಳ ವಿವ