Posts

Showing posts from February, 2020

ಫೆಬ್ರವರಿ ೨, ೨೦೨೦: "ಹಸಿರಿನ ಹರಿಕಾರರು" ಬಸವೇಶ್ವರನಗರದಲ್ಲಿ ನಡೆಸಿದ ಮೊದಲ ವಾರ್ಷಿಕೋತ್ಸವದಲ್ಲಿ ೩೬,೫೦೨ ಮರಗಳನ್ನು ನೆಡುವ ಸಂಕಲ್ಪ "Hasirina Harikaararu" OTGians pledged for planting 36,502 trees as part of their festivities during their first annual day celebration at Basaveshwaranagar

Image
This blog is both in Kannada and English, English version is given later. ಫೆಬ್ರವರಿ ೨, ೨೦೨೦ರ ಭಾನುವಾರದಂದು ಬಸವೇಶ್ವರನಗರದ ವಾಣಿ ಶಾಲಾ ವಥಾರದಲ್ಲಿ ಹಬ್ಬದ ವಾತಾವರಣವಿತ್ತು. "ಹಸಿರಿನ ಹರಿಕಾರರು" ಎಂಬ ಸಾವಯವ ತಾರಸಿ ತೋಟಗಾರರ ಸಮೂಹ ಮೊದಲ ವರ್ಷದಲ್ಲೇ  ಬೃಹತ್‌ ಆಗಿ ಬೆಳೆದು ಶಾಲೆಗಳನ್ನೂ ಸೇರಿಸಿಕೊಂಡು ಅನೇಕ ಚಟುವಟಿಕೆಗಳ ಸಾಧನೆಯನ್ನು ಮಾಡಿ ಗಳಿಸಿದ ಸಂತೋಷ, ತೃಪ್ತಿ, ಆತ್ಮ ವಿಶ್ವಾಸ ಹಾಗೂ ಸಂಘಟನಾಶಕ್ತಿಯ ಛಾಯೆಗಳೆಲ್ಲಾ ಈ ಕಾರ್ಯಕ್ರಮದಲ್ಲಿ ಆವರಿಸಿಕೊಂಡಿದ್ದವು. ಮರಗಳನ್ನು ನೆಡುವ ಸಂಕಲ್ಪ ಹೊರಡಿಸಲು ನಮಗೂ ಅವಕಾಶವಿತ್ತು. ೩೬,೫೦೨ ಮರಗಳನ್ನು ನೆಡುವ ಸಂಕಲ್ಪ ಹೊರಡಿಸುವ ಮೂಲಕವೂ ಹಸಿರಿನ ಹರಿಕಾರರು ಹೊಸ ಹರಿಕಾರಗಳನ್ನು ಬರೆಯುತ್ತಾ ಹೋಗುವತ್ತ  ಸಂಭ್ರಮಿಸಿದರು. ೨೩ ಫೆಬ್ರವರಿ ೨೦೨೦ರ ಭಾನುವಾರದಂದು ಊಟ ಫ್ರಾಮ್‌ ಯುವರ್‌ ತೋಟದವರ ಪ್ರಾಯೋಜಕತ್ವದಲ್ಲಿ ನಮ್ಮಿಂದ ಮತ್ತೆ ಮರಗಳನ್ನು ನೆಡುವ ಸಂಕಲ್ಪ ಯಜ್ಞ ನಡೆಯಲಿದೆ, ಅಲ್ಲಿ ನಮ್ಮೊಂದಿಗೆ ಸೇರಲು ಈ ಕಾರ್ಯಕ್ರಮದ ಮಾಹಿತಿಯನ್ನು ಕೆಳಗೆ ಕೊಡಲಾಗಿದೆ, ಬನ್ನಿ, ನಮ್ಮ ಮಳಿಗೆಯನ್ನೂ ಹುಡುಕಿಕೊಂಡು ಬನ್ನಿ! ಮತ್ತೆ ಮರವಾಗಬಲ್ಲ, ನಾವು ಉಚಿತವಾಗಿ ಹಂಚುವ ಮರಗೊಂಡೆ ಹೂವಿನ ಕಾಂಡದ ತುಂಡುಗಳನ್ನು ಪಡೆದು ಕೊಂಡುಹೋಗಿ. ಫೆಬ್ರವರಿ ೨ರಂದು  ನಮ್ಮೊಂದಿಗೆ ಸಂಕಲ್ಪ ಮಾಡಿದ ಹಸಿರಿನ ಹರಿಕಾರರ ವಿವರವನ್ನು ಈಕೆಳಗೆ ಕೊಡಲಾಗಿದೆ: ಇ