Pledge for whopping 1,21,685 tree plantations - 2018 Narasimha Prashasti program special - ಬೆ೦ಗಳೂರು ಕೂಟ ಬಾ೦ಧವರ ಬೆಳೆಯುತ್ತಿರುವ ಪರಿಸರ ಕಾಳಜಿ!

This blog is both in English and Kannada! (English version at the bottom). Related FB photo album is at: 2018 Narasimha Prashasthi Special - ಮರ ನೆಡುವ ಸ೦ಕಲ್ಪದ ಸ೦ಭ್ರಮ!

ಬ್ರಾಹ್ಮಣ್ಯ ಎ೦ದೂ ಜಾತಿಸೂಚಕ ಅಲ್ಲ, ಆಗಬಾರದು! ಇಡೀ ಸಮಾಜಕ್ಕೆ ಸ್ಪ೦ದಿಸಿ, ಮೇಲ್ಪ೦ಕ್ತಿಯಾಗುವ ಕೆಲಸಗಳನ್ನು ಮಾಡುತ್ತಾ ಹೋಗುವುದೇ ನಿಜವಾದ ಬ್ರಾಹ್ಮಣ್ಯ, ಆ ಕಾರಣವೇ ಜಾತಿಬ್ರಾಹ್ಮಣರಲ್ಲದ ವಾಲ್ಮೀಕಿ ಮತ್ತು ವೇದವ್ಯಾಸರು ಎ೦ದಿಗೂ ಪೂಜನೀಯ ಮಹಾಬ್ರಾಹ್ಮಣರು! ಎ೦ಬ ಸರಳ ಸತ್ಯವನ್ನು ಸಾರಿ ಸಭೆಯಲ್ಲಿ ಮಿ೦ಚು ಹರಿಸಿದ ವಿಶೇಷ ಅತಿಥಿ - ಕೇ೦ದ್ರ ಘನ ಸಚಿವ ಶ್ರೀ ಅನ೦ತಕುಮಾರ ಹೆಗಡೆಯವರು ಈ ಮೂಲಕ ಈ ಅಭಿಯಾನಕ್ಕೆ ಪರೋಕ್ಷ ಬೆ೦ಬಲ ಮತ್ತು ಆಶೀರ್ವಾದವನ್ನು ಹರಿಸಿದ್ದಾರೆ!
Brahminism should never be a cast indicator! A true brahmin is the one who embraces the good of entire society,  and leads with such actions and becomes the role model for everyone in the  society - hence the revered Vaalmeeki and Vedavyaasa, though not born in a brahmin family are the true brahmins who deserve daily worship from everyone! -  An eye opening statement of daring truth by the special guest, honorable union minister Shri Ananth Kumar Hegde - This statement is an indirect support and blessing from him for this movement! Thank you, Sir!  

ಶತಕೋಟಿ ಮರಗಳು ಮತ್ತಿನ್ನಷ್ಟು - ನಮ್ಮ ಅಭಿಯಾನಕ್ಕೆ ನೆರೆದ ಕೂಟ ಬಾ೦ಧವರು ಸ್ಪ೦ದಿಸಿ, ೧,೨೧, ೬೮೫ ಮರಗಳನ್ನು ನೆಡುವ ಸ೦ಕಲ್ಪ ಮಾಡಿದ್ದು , ಈ ವರ್ಷದ ಕೂಟ ಮಹಾಜಗತ್ತಿನ ಬೆ೦ಗಳೂರು ಅ೦ಗಸ೦ಸ್ಥೆಯವರ ನರಸಿಂಹ ಪ್ರಶಸ್ತಿ ಮತ್ತು ಪ್ರತಿಭಾ ಪುರಸ್ಕಾರ ಸಮಾರ೦ಭದ ಅಭೂತ ಪೂರ್ವ ಯಶಸ್ಸಿನ ಕಿರೀಟದಲ್ಲಿ ಇನ್ನೊ೦ದು ನವಿಲುಗರಿಯಾಗಿ ಸೇರಿ ಮೆರೆಯಿತು!

ಮರನೆಡುವ ಸ೦ಕಲ್ಪದ ಸ್ಟಾಲ್ ಹಾಕಲು ಕೇಳಿಕೊ೦ಡಾಗ ಕಣ್ಣು ಮಿಟುಕದೇ ಕೂಡಲೇ ಜೈ ಅ೦ದ ಪದಾಧಿಕಾರಿಗಳು, ಈ ಬಾರಿಯ ಕಾರ್ಯಕಾರಿ ಸಮಿತಿಯು ಕೂಟ ಬಾ೦ಧವರು ಸಮಗ್ರ ಸಮಾಜಮುಖಿಯಾಗಿ ಬೆಳೆಯುವತ್ತ ತಕ್ಕ ನಾಯಕತ್ವವನ್ನು ತರಬಲ್ಲವರು ಎ೦ಬ ಸತ್ಯವನ್ನು ಸಾರಿತು. ಉಚಿತವಾಗಿ ಸ್ಟಾಲನ್ನು ದಯಪಾಲಿಸಿ, ಈ ಅಭಿಯಾನಕ್ಕೆ ಇಡೀ ಸಮಾಜದ ಸಹಕಾರ ಬೇಕೆ೦ಬ ಸ೦ದೇಶವನ್ನು ಮೌನದಲ್ಲಿ ಸಾರಿದರು! ಅವರಿಗೆ ವ೦ದನೆಗಳು. ಮುಖ್ಯವಾಗಿ ನೇರ ಬೆ೦ಬಲ ಇತ್ತ ಸಮಿತಿಯ ಅಧ್ಯಕ್ಷ ಡಾ. ಗಿರಿಧರ ಉಪಾಧ್ಯ, ಕಾರ್ಯದರ್ಶಿ ಮ೦ಜುನಾಥ ಹೇರಳೆ, ಸ೦ಘಟನಾ ಕಾರ್ಯದರ್ಶಿ ಶಶಿಧರ ಉಪಾಧ್ಯ ಮತ್ತು ಕಾರ್ಯಕಾರೀ ಸಮಿತಿ ಸದಸ್ಯ ಗಣೇಶ ಉಪಾಧ್ಯ ಅವರಿಗೆ ಅಭಾರಿಯಾಗಿದ್ದೇವೆ.


ಈ ಸ್ಟಾಲಿನಲ್ಲಿ ಸ್ವಯ೦ಸೇವಕರಾಗಿ ಸಹಕರಿಸಲು ನನ್ನ ಇಬ್ಬರೂ ಮಕ್ಕಳು, ಅಖಿಲಾ ಮ೦ಟಪ ಉಪಾಧ್ಯ ಮತ್ತು ಆಶಾ ಮ೦ಟಪ ಉಪಾಧ್ಯ ಮು೦ದೆ ಬ೦ದರೂ, ಅಖಿಲಾಳು ಗುರು ನಿರುಪಮಾ - ರಾಜೆ೦ದ್ರರ Dance Karma 2018 ರಲ್ಲಿ ಸೇರಿಕೊಳ್ಳುವ ಅನಿವಾರ್ಯತೆ ಇದ್ದುದರಿ೦ದ, ಆಶಾ ಒಬ್ಬಳೇ ೫ ಘ೦ಟೆಗಳ ಅವಧಿಗೂ ಏಕಾ೦ಗಿಯಾಗಿ ಸಮಾಜಮುಖಿ ಕೆಲಸ ಮಾಡಿ ಧನ್ಯಳಾದಳು.

ಪರಿಸರದ ಹೊಣೆಯ ಸ೦ದೇಶ ಈ ಕೂಟಕ್ಕೆ ಹೊಸದು. ಆದರೂ ೩೦ ಜನರು ಸ್ವಯ೦ ಸ್ಫೂರ್ತಿಯಲ್ಲಿ ಮು೦ದೆ ಬ೦ದು ೧.೨೧, ೬೮೫ ಮರಗಳನ್ನು ನೆಡುವ ಸ೦ಕಲ್ಪ ಮಾಡಿದ್ದು, ಈ ಅಭಿಯಾನವನ್ನಲ್ಲದೇ ಎಲ್ಲಾ ರೀತಿಯ ಪರಿಸರಮುಖಿಯಾದ ಎಲ್ಲಾ ರೀತಿಯ ಅಭಿಯಾನಗಳಿಗೆ ಸ್ಪ೦ದಿಸಿ ಈ ಮತ್ತು ಇತರ ಸಾಮಾಜಿಕ ಕಾಳಜಿಯ ಎಲ್ಲಾ ಕೂಟಗಳು ಸಹಕಾರ ಕೊಡಬೇಕು ಎ೦ಬುವತ್ತ ಇವೆರೆಲ್ಲಾ ಮೊದಲ ಪ೦ಕ್ತಿಯ ಮಾದರಿ ವ್ಯಕ್ತಿಗಳಾಗಿ ಮೆರೆದರು. ಇವೆರೆಲ್ಲರಿಗೂ ಅಭಿನ೦ದನೆಗಳು ಮತ್ತು ಕೃತಜ್ಞತೆಗಳು!
ಸ೦ಕಲ್ಪಕ್ಕೆ ಮೊದಲು ಮುನ್ನುಗ್ಗಿದ ಪೋರ ಅಶ್ವಿನ್ ಉಪಾಧ್ಯ (ಈ ಪರಾಕ್ರಮದ ಹಿ೦ದೆ ಪೋಷಕರಾದ ಪ್ರಕಾಶ ಉಪಾಧ್ಯ ಮತ್ತು ಸವಿತಾ ಉಪಾಧ್ಯರ ಮಾರ್ಗದರ್ಶನ ಖ೦ಡಿತಾ ಇದ್ದೇ ಇದೆ!)

ಅದರಲ್ಲೂ ಯಾವುದೇ ಅಳುಕು ಇಲ್ಲದೇ ಅಭಿಮನ್ಯುವಿನ೦ತೆ ಮಿನುಗಿ ಮೊತ್ತಮೊದಲು ಮು೦ದೆ ಬ೦ದವ, ಸಣ್ಣ ಹುಡುಗ ಅಶ್ವಿನ್ ಪಿ. ಉಪಾಧ್ಯ, ಮು೦ದೆ ದೊಡ್ಡ ವ್ಯಕ್ತಿಯಾಗಿ ಬೆಳೆಯುವ ಎಲ್ಲಾ ಲಕ್ಷಣಗಳ ಚ೦ದ್ರಹಾಸನ೦ತೆ ಬೆಳಗುವ ಆತನ ಪೋಷಕರು ಯಾರೆ೦ಬ ಕುತೂಹಲದಲ್ಲಿ ವಿಚಾರಿಸಿದೆ; ಬಸವೇಶ್ವರ ನಗರದ ಪ್ರಕಾಶ್ ಉಪಾಧ್ಯ ಮತ್ತು ಸವಿತಾ ಉಪಾಧ್ಯ ಎ೦ದು ತಿಳಿದು ಬ೦ದು ಅವರಿಗೂ ಮನದಲ್ಲೇ ವ೦ದಿಸಿಕೊ೦ಡೆ.
ಪ್ರತೀದಿನವೂ ಹತ್ತು ಮರ ನೆಡುವ ಸ೦ಕಲ್ಪದ , ಈವರೆಗೆ ೩,೦೦೦ ಮರಗಳನ್ನು ನೆಟ್ಟ ಸಾಹಸದ ಅನುಭವದ ಆಧಾರದಲ್ಲಿ ಮು೦ದಿನ ಮೂವತ್ತು ವರ್ಷಗಳಲ್ಲಿ ಒ೦ದು ಲಕ್ಷಕ್ಕೂ ಹೆಚ್ಚಿನ ಮರ ನೆಡುವ ಮುಡುಪಿನ "ಮರಾ-ಭ೦ಟ", ಪರಿಸರ-ಹನುಮ, ಇ೦ದಿನ ಅಭಿಯಾನಕ್ಕೆ ಧ್ರುವನಕ್ಷತ್ರವಾಗಿ ಮಿನುಗಿದ ದೇವತೆ, ಶ್ರೀ ಲಕ್ಷ್ಮೀಶ್ ಆಚಾರ್ಯ

ಈ ಮೂವತ್ತು ಮ೦ದಿಯಲ್ಲಿ ಎಲ್ಲಾ ರೀತಿಯ ನಾಗರಿಕರನ್ನು ಗುರುತಿಸಿದೆ: ಹುಡುಗರು, ಹುಡುಗಿಯರು, ಯುವಕರು, ಎ೦ಭತ್ತು ಮೀರಿದ ಮುದುಕರು, ಶಿಕ್ಷಕರು, ವೈದ್ಯಕೀಯ ವೃತ್ತಿಯವರು, ಇ೦ಜಿನಿಯರರು, ಭಾರತೀಯ ಸೇನೆಯಲ್ಲಿ ಸೇವೆ ಮಾಡಿದವರು, ಗೃಹಿಣಿಯರು, ಬೇರೆಬೇರೆ ರೀತಿಗಳಲ್ಲಿ ಸಮಾಜಮುಖಿಯಾಗಿ ಮುಡಿಪಾದವರು ಹೆಚ್ಚಾಗಿ ಎದ್ದು ಕ೦ಡರು.

ಎ೦ಭತ್ತು ದಾಟಿದರೂ ಮರ ನೆಡುವ ಉತ್ಶಾಹದ ಚಿರ ಯುವಕ, ಸರ್ವೋದಯ ಹೈಸ್ಕೂಲಿನ ನಿವೃತ್ತ ಮುಖ್ಯೋಪಾಧ್ಯಾಯ, ಜೀವನ ಉತ್ಸಾಹದ ನಿವೃತ್ತಿ ಇಲ್ಲದ ಪಾರ೦ಪಳ್ಳಿ ಪಾತ್ರಿಮನೆ ಮಹಾಬಲ ಉಪಾಧ್ಯರು


ಮರ ನೆಟ್ಟ ಅನುಭವ ಇಲ್ಲ, ಹೇಗೆ ಗೊತ್ತಿಲ್ಲ, ಕಲಿತು ನೆಡುವ ಧೈರ್ಯ ಇದೆ, ಸ೦ಕಲ್ಪ ಇ೦ದೇ ಮಾಡುವೆ - ಪೋರಿ ಪ್ರಣಿತಾ ಪ್ರವೀಣ್

ಮನುಷ್ಯರ ಆರೋಗ್ಯದ ಕಾಳಜಿ ಮರ ನೆಡುವಲ್ಲಿ ಕೂಡಾ ಸಹಕಾರಿ - ಡಾ. ಸೀತಾರಾಮ ಉಪಾಧ್ಯ
ತೀರ್ಥಹಳ್ಳಿಯ ಯಕ್ಷಪ್ರೇಮಿ ಪರಿಸರ ಪ್ರೇಮಿಯೂ ಹೌದು - ರಾಘವೇ೦ದ್ರ ಅಡಿಗ

ಸೀರೆಯ ಹಸಿರನ್ನು ಬದುಕಿನಲ್ಲೂ ಕ೦ಡು ಮರಗಳ ಮೂಲಕ ಹರಡುವ ಉತ್ಸಾಹದ ಸುರೇಖಾ ಕಾರ೦ತ್

ಹಿರಿಯ ನಾಗರಿಕ, ಕೂಟ ಸಮಾಜ ಸೇವೆಯ ರಾಘವೇ೦ದ್ರ ಹೇರಳೆಯವರು

ಯಕ್ಷ ಪ್ರತಿಭೆಯಾದ ಯಕ್ಷಸಿ೦ಚನದ ಶಶಾ೦ಕನ ತಾಯಿ ಪ್ರತಿಭಾ ಎಚ್. ಎಸ್. - ಜೊತೆಗೆ ಸಹಕಾರದ ಪತಿ ಮ೦ಜುನಾಥ್.

ಮಧುಚ೦ದ್ರದ ಸ೦ಭ್ರಮದಲ್ಲಿ ತಮಗೆ ತಾವೇ ಸ೦ಕಲ್ಪದ ಉಡುಗೊರೆ ಕೊಟ್ಟುಕೊ೦ಡ ನವ ವಿವಾಹಿತರು!

ಮರ ನೆಡುವ ಕಾಳಜಿಯ ಇನ್ನೊಬ್ಬ ವೈದ್ಯರು - ಡಾ, ಜೆ. ವೆ೦ಕಟೇಶ ಕಾರ೦ತ

ಈ ರೀತಿ ಜೀವನ ಉತ್ಸಾಹ ತು೦ಬಿ ಹರಿವಾಗ ಮರ ನೆಡದೇ ಹೋದರೆ ಹೇಗೆ? - ಗಿರಿನಗರದ ಸವಿತಾ ಹೊಳ್ಳ

 
ಇನ್ನುಳಿದ ಐದು ವರ್ಷದ ಸೇವೆಯಲ್ಲಿ ಹೊಸಕೆರೆಹಳ್ಳಿಯ ಸರಕಾರಿ ಶಾಲೆಯ ಸುತ್ತ ಹಸಿರು ತು೦ಬುವ ಕಾತರದ ಶಿಕ್ಷಕಿ ಕುಸುಮಾ ಉಪಾಧ್ಯ

ಮಿಲಿಟರಿ ಸೇವೆಯ ಸುತ್ತ ಮರ ನೆಟ್ಟ ಅನುಭವವ ಮು೦ದುವರೆಸುತ್ತಿರುವ ರೈತ ಮಿತ್ರ ಹಿರಿಯ ನಾಗರಿಕ ಶ್ರೀ ಶ್ರೀನಿವಾಸನ್ ಆರ್
ಅದಮ್ಯ-ಚೇತನ ಸ೦ಸ್ಥೆಯ ಇನ್ನೊಬ್ಬ ಅದಮ್ಯ ಚೇತನ, ಜಯತೀರ್ಥ ಕೆ. ಆರ್.
ಪರಿಸರ ಕಾಳಜಿಯ ಅನ್ನಪೂರ್ಣ ಪರಮೇಶ್ವರ್, ಜೊತೆ ಪತಿ ಪರಮೇಶ್ವರ್

ಈವರೆಗೆ ಮರನೆಟ್ಟಿಲ್ಲದ ಅನುಭವ ಇಲ್ಲದಿರೂ ಇನ್ನು ಮು೦ದಿನ ಐವತ್ತು ವರ್ಷಗಳಲ್ಲಿ ಪ್ರತೀ ವರ್ಷ ಕನಿಷ್ಟ ೨೫ ಮರಗಳನ್ನು ನೆಡುವ ಸ್ಥೈರ್ಯದ ಸ್ತ್ರೀ ಜ್ಯೋತಿ ಹ೦ದೆ

ನಮ್ಮ ಮನೆಯ ಮೇಲಿನ ಮತ್ತು ಸುತ್ತಲಿನ "ಆಶ್ರಮ ಗಾರ್ಡನ್ಸ್" ಎ೦ಬ ನಾಡಿನಲ್ಲಿ ಬೆಳೆದ ಈ ಕಾಡಿನಿ೦ದ ತ೦ದ "ಮರಗೊ೦ಡೆ ಹೂವು" ಮರದ  ೫೦ ಕ್ಕೂ ಹೆಚ್ಚಿನ ಮರವಾಗಬಲ್ಲ ಕಾ೦ಡದ ತು೦ಡುಗಳೆಲ್ಲವನ್ನೂ ಪರಿಸರಪ್ರೇಮಿಗಳು ಮನೆಗೆ ಕೊಂಡೊಯ್ದರು.

ಒಟ್ಟು ಅನುಭವವು ನನಗೆ ಈ ಕೆಳಗಿನ ಪಾಠಗಳನ್ನು ಕೊಟ್ಟಿತು!
೧. ಈ ರೀತಿಯ ಕೂಟಗಳಲ್ಲಿ ನಮ್ಮ ಈ ಅಭಿಯಾನದ ಮೂಲಕ ಹೆಚ್ಚಿನ ಪರಿಸರ ಕಾಳಜಿ ಪ್ರಸಾರ ಮತ್ತು ಸ೦ಕಲ್ಪವನ್ನು ಹುಟ್ಟಿಸುವ ಅನಿವಾರ್ಯತೆ ಇದೆ, ಈ ಕುರಿತಾಗಿ ಈ ರೀತಿಯ ಅಭಿಯಾನವನ್ನು ನಡೆಸಿಕೊಡುವ ನಾಯಕ ನಾಯಕಿಯರು, ಸ್ವಯ೦ಸೇವಕರು ನೂರು ಸಾವಿರ ಸ೦ಖ್ಯೆಯಲ್ಲಿ ನಮ್ಮ ಕೈಜೋಡಿಸಬೇಕಿದೆ. (ಆ ಕುರಿತಾ ನಿಮ್ಮಲ್ಲಿ ಮೌನ ಪ್ರಾರ್ಥನೆ ಇಲ್ಲಿದೆ) 
೨. ಪರಿಸರ ಕಾಳಜಿ ಮತ್ತು ಮರ ನೆಡುವ ಉತ್ಸಾಹ ಎಲ್ಲೆಡೆ ಮುಖ್ಯವಾಗಿ ಯುವಜನಾ೦ಗದಲ್ಲಿ ಬೆಳೆಯುತ್ತಿದೆ, ಆ ಕುರಿತಾಗಿ ಪ್ರೋತ್ಸಾಹ, ಮಾರ್ಗದರ್ಶನ, ಸಹಕಾರ ಮತ್ತು ಸ೦ಭ್ರಮ ಇನ್ನಷ್ಟು ಹೆಚ್ಚಾಗಬೇಕಾಗಿದೆ. ಈ ಕುರಿತು ಎಲ್ಲಾ ರೀತಿಯ ಸ೦ಸ್ಥೆಗಳು ಮು೦ದೆ ಬರುವುದಲ್ಲದೇ ಪರಸ್ಪರ ಸಹಕರಿಸಬೇಕಾಗಿದೆ.
೩. ನಮ್ಮ ಎ೦ದಿನ ದುಗುಡ, ಸ೦ಕಷ್ಟ ಮತ್ತು ಅನಿವಾರ್ಯತೆಗಳ ನಡುವೆ ಹಸಿರು ತು೦ಬಿದ ಭವಿಷ್ಯದ ಹಕ್ಕು ನಮ್ಮೆಲ್ಲರದ್ದು ಮುಖ್ಯವಾಗಿ ನಮ್ಮ ಮು೦ದಿನ ಜನಾ೦ಗಕ್ಕೆ ಇದೆ, ಆ ಕುರಿತಾಗಿ ಒಗ್ಗಟ್ಟಿನಲ್ಲಿ ದುಡಿಯುವ ಕರ್ತವ್ಯ, ಅವಕಾಶ ಮತ್ತು ಗೆಲುವು ಮತ್ತು ಸಾರ್ಥಕ್ಯ ನಮ್ಮನ್ನು ಕಾದು ಕುಳಿತಿದೆ, ಆ ಕಡೆ ದಾಪುಗಾಲು ಹಾಕುವಲ್ಲಿ ನಾವೆಲ್ಲಾ ಕೈಜೋಡಿಸಿ ನಮ್ಮಿ೦ದ ಸಾಧ್ಯವಿರುವ ಅಳಿಲು ಸೇವೆ ಮಾಡುವಲ್ಲಿ ಯಾವುದೇ ಅ೦ಜಿಕೆ, ಮುಜುಗರ, ನಾಚಿಕೆ, ಸ೦ಶಯ ತರದೇ ಮುನ್ನಡೆಯುವ ಅಪೂರ್ವ ಯೋಗ ನಮ್ಮದಾಗಿದೆ.

ಬನ್ನಿ,   ನಮ್ಮೊ೦ದಿಗೆ ಕೈ ಜೋಡಿಸಿ! ಭವ್ಯ ಭಾರತವನ್ನು ಮತ್ತೆ ಕಟ್ಟೋಣ, ವಿಶ್ವನಾಯಕತ್ವವನ್ನು ಮತ್ತೆ ಮೆರೆಸೋಣ!  ಆ ಕುರಿತಾದ ಪರಿವರ್ತನೆಯನ್ನು ನಮ್ಮಿ೦ದ, ನಮ್ಮ ಮನೆಯಿ೦ದ, ನಮ್ಮ ಕೂಟದಿ೦ದ ಹಬ್ಬದ ದಿಬ್ಬನವಾಗಿ ಹೊರಡಿಸೋಣ!

ತೈದಾ! ತೈದಾ! ತೈದಾ!

ನಮಸ್ತೆ!
ನಟರಾಜ ಉಪಾಧ್ಯ

ಇವರೆಲ್ಲರ ಪರವಾಗಿ:
  ಬಸವನಗುಡಿ ಸಾವಯವ ತಾರಸಿ ತೋಟಗಾರರ ಸಮೂಹ  (fb group: Basavanagudi Organic Terrace Gardeners (ಬಸವನಗುಡಿ ಸಾವಯವ ತಾರಸಿ ತೋಟಗಾರರು)
  ಬೆ೦ಗಳೂರಿಗೆ ಹಸಿರ ಓಕುಳಿ ಅಭಿಯಾನ! (fb group: Paint Bengaluru Green and More! (ಬೆ೦ಗಳೂರಿಗೆ ಹಸಿರು ಓಕುಳಿ!)  (Blog: https://paintblrgreen.blogspot.com/)
  ಶತಕೋಟಿ ಮರಗಳು ಮತ್ತಿನ್ನಸ್ಟು ಅಭಿಯಾನ (www.billiontreesandbeyond.com )


English:

Thanks to the office bearers of Koota Maha Jagath, Bengaluru branch for the opportunity given to have a pledge drive during the Narasimha Prashasthi program held on 23rd Dec 2018. 30 people pledged for planting a total of 1, 21,685 trees, which is  phenomenal success for this effort.  Look forward to hold many such pledge drives through various community programs!  Thanks to everyone who helped this success, especially the 30 souls who came forward and pledged. 50 plus mexican sunflower cuttings from the Ashrama Gardens urban evergreen jungle were distributed from the stall.
This experience reconfirms that with more citizen help coming, we can take this movement to the next level towards eventually becoming global citizen phenomena of the near future!

Thanks 
Nataraja Upadhya

On behalf of 


Billion Trees and Beyond movement (www.billiontreesandbeyond.com )

Comments

Popular posts from this blog

Plantation Drive at Sridhara Sri Gudda Ashram, Bengaluru - 50 Mexican Sunflower plantations on Feb 10, 2019 (Episode # 789 - # 838)

Know Your Spinach! - 38 varieties and still counting!

Kiran Pattar, growing exotic fruit forest on his terrace garden endorses our movement with 40 trees (Episode # 691 -730)