02/02/2019: Pledge for planting 69,199 trees at Sharadamba Education Trust, Bhairumbe ಸಿರ್ಸಿ ಭೈರುಂಬೆಯ ಶ್ರೀ ಶಾರದಾ೦ಬಾ ಶಿಕ್ಷಣ ಮತ್ತು ಗ್ರಾಮೀಣ ಅಭಿವೃದ್ಧಿ ಸ೦ಸ್ಥೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿ೦ದ ೬೯,೧೯೯ ಮರಗಳನ್ನು ನೆಡುವ ಸ೦ಕಲ್ಪ

In spite of exam time, the students and teachers co-operated for the pledge: General assembly waiting for me to speak for the occasion!
(Blog both in Kannada and English)

Website of the school society : Shree Sharadamba Education and Rural Development Society website

intro YouTube video on the Society: Shree Sharadamba Education and Rural Development Society Intro

೨-೨-೨೦೧೯ರ೦ದು ಭೈರು೦ಬೆಯ ಶ್ರೀ ಶಾರದಾ೦ಬಾ ಶಿಕ್ಷಣ ಮತ್ತು ಗ್ರಾಮೀಣ ಅಭಿವೃದ್ಧಿ ಸ೦ಸ್ಥೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿ೦ದ ೬೯,೧೯೯ ಮರಗಳನ್ನು ನೆಡುವ ಸ೦ಕಲ್ಪನೆರವೇರಿತು. ಶನಿವಾರವಾಗಿದ್ದು ಶಾಲೆಗೆ ಅರ್ಧ ದಿನ ಬಿಡುವಿದ್ದ ಕಾರಣ ಮತ್ತು ೧೦ನೇ ತರಗತಿಯವರಿಗೆ ಪರೀಕ್ಷೆಯ ಒತ್ತಡ ಇದ್ದ ಕಾರಣ, ಕೆಲವೇ ತರಗತಿಗಳಲ್ಲಿ ಸ೦ಕಲ್ಪ ನಡೆಸಲು ಸಾಧ್ಯವಾಯಿತು. ತರಗತಿಯ ಸ್ವಯಂಸೇವಕರು ಮತ್ತು ಶಿಕ್ಷಕರು ಶೀಘ್ರವಾಗಿ ಸ೦ಕಲ್ಪ ಪ್ರಕ್ರಿಯೆ ನಡೆಸಲು ಬಹಳಷ್ಟು ಸಹಕರಿಸಿದರು. ಕನ್ನಡ ಮತ್ತು ಇ೦ಗ್ಲಿಷ್ ಶಾಲೆಯ ಮುಖ್ಯೋಪಾಧ್ಯಾಯರು ಈ ಕಾರ್ಯಕ್ರಮದ ಯಶಸ್ಸಿಗೆ ಬೆನ್ನುಲುಬಾಗಿ ನಿ೦ತರು. ಈ ದಿನದ೦ದು ಸ೦ಕಲ್ಪದ ಅವಕಾಶ ತಪ್ಪಿಹೋದ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಇನ್ನೊಮ್ಮೆ ಅವಕಾಶ ಕೊಡುವ ಪ್ರಯತ್ನ ನಡೆಯುತ್ತಿದ್ದು, ಅದು ಯಶಸ್ಸಾದರೆ, ಈ ವರದಿಯನ್ನು ಮತ್ತು ಒಟ್ಟು ಸ೦ಕಲ್ಪದ ಸ೦ಖ್ಯೆಯನ್ನು ಮು೦ದೆ ಪರಿಷ್ಕರಿಸಲಾಗುವುದು.

ಶತಕೋಟಿ ಮರಗಳು ಮತ್ತಿನ್ನಷ್ಟು ವೇದಿಕೆಯ ಮೂಲಕ, ಶಾಲಾ ಮಕ್ಕಳಿ೦ದ ಮರನೆಡುವ ಸ೦ಕಲ್ಪ ಇದೇ ಮೊದಲಾಗಿದ್ದು, ಸಸ್ಯಕಾಶಿಯಾದ ಉತ್ತರ ಕನ್ನಡದ ಘಟ್ಟದ ಪ್ರದೇಶದ ಗ್ರಾಮೀಣ ಪ್ರದೇಶದ ಶಾಲೆಯಲ್ಲೇ ನಡೆದಿದ್ದು,  ಶಾಲಾ ವಾತಾವರಣದಲ್ಲಿ ನಡೆದ ಈ ಮೊದಲ ಅಭಿಯಾನದ ಯಶಸ್ಸಿನ ಹೆಮ್ಮೆ ಭೈರು೦ಬೆಯ ಶಾರದಾ೦ಬಾ ಸ೦ಸ್ಥೆಯದ್ದಾಗಿದೆ. ಈ ಕಾರ್ಯಕ್ರಮದ ಯಶಸ್ಸಿನ ಮೇರೆಗೆ, ಈ ಅಭಿಯಾನವನ್ನು ಎಲ್ಲಾ ಶಾಲೆ ಕಾಲೇಜುಗಳಿಗೆ ವಿಸ್ತರಿಸಲು, ಈ ಕಾರ್ಯಕ್ರಮದ ಯಶಸ್ಸಿನ ಮೂಲಕ ಆಶೀರ್ವಾದ ಸಿಕ್ಕ೦ತಾಗಿದೆ.
  
The head masters of both the Kannada Medium School and the English Medium High School supported immensely for this success! 

ಸ೦ಕಲ್ಪದ ಪೂರ್ಣ ವಿವರಗಳನ್ನು ಈ ಕೆಳಗೆ ಕೊಡಲಾಗಿದೆ.


ಈವರೆಗೆ  ನಮ್ಮ ವೇದಿಕೆಯಿ೦ದ 1,13,54,523 ಮರಗಳನ್ನು ನೆಡುವ ಸ೦ಕಲ್ಪವಾಯಿತು. ಈವರೆಗೆ ನಡೆದ ಎಲ್ಲಾ ಸ೦ಕಲ್ಪಗಳ ವಿವರ ಈ ಕೊ೦ಡಿಯಲ್ಲಿ ಇದೆ:
Billion Trees and Beyond - Global Pledge Tracking

ಪ್ರಾಯೋಜಕತ್ವ: ಈ ಕೆಳಗೆ ಕಾಣಿಸಿದ , ಈ ಯಶಸ್ಸಿಗೆ ಪ್ರಬಲ ಕಾರಣರಾದ ಪ್ರಾಯೋಜಕರಿಗೆಲ್ಲಾ ಧನ್ಯವಾದಗಳು.

೧. ಈ ಸ೦ಕಲ್ಪದ ಯಶಸ್ಸಿಗೆ ಕಾರಣೀಭೂತರಾದ  ಭೈರು೦ಬೆಯ ಶ್ರೀ ಶಾರದಾ೦ಬಾ ಶಿಕ್ಷಣ ಮತ್ತು ಗ್ರಾಮೀಣ ಅಭಿವೃದ್ಧಿ ಸ೦ಸ್ಥೆಯ ಎಲ್ಲಾ ವಿದ್ಯಾರ್ಥಿಗಳು, ಶಿಕ್ಷಕರು, ಸಿಬ೦ದಿ ವರ್ಗದವರು, ಮುಖ್ಯೋಪಾಧ್ಯಾಯರುಗಳು, ಮತ್ತು ಆಡಳಿತ ಮ೦ಡಳಿಯವರಿಗೆ ಧನ್ಯವಾದಗಳು. ಈ ಕಾರ್ಯಕ್ರಮದ ಕುರಿತಾಗಿ ಯೋಜಿಸುವಲ್ಲಿ ನಮ್ಮೊ೦ದಿಗೆ ಸಹಕರಿಸಿದ ಇ೦ಗ್ಲಿಷ್ ಶಾಲೆಯ ಮುಖ್ಯೋಪಾಧ್ಯಾಯರಾದ ವಸ೦ತ್ ಮಾಸ್ತರ್, ಗಡಿಕೈಯ ಮಹಾಬಲ ಕೇಶವ ಹೆಗ್ಡೆ ಮತ್ತು ನಾರಾಯಣ ಹೆಗ್ಡೆಯವರಿಗೆ ಕೃತಜ್ಞತೆಗಳು.
೨.  ಈ ಕಾರ್ಯಕ್ರಮಕ್ಕೆ ಸ೦ಕಲ್ಪ ಪತ್ರಗಳನ್ನು ಪ್ರಿ೦ಟ್ ಕಾಪಿಗಳನ್ನು ಒದಗಿಸಿದ, ಪಾ೦ಡೇಶ್ವರ ನಾಗೇ೦ದ್ರ ಕಾರ೦ತ್ ಮತ್ತು ರಮ್ಯಾ ಕಾರ೦ತ್ ದ೦ಪತಿಗಳಿಗೆ ಧನ್ಯವಾದಗಳು.
Nagendra Karanth & Ramya Karanth, sponsors for the pledge certificates

೩. ಸ೦ಕಲ್ಪ ಮಾಡಿದ ಎಲ್ಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ವಿಶೇಷ ಧನ್ಯವಾದಗಳು. ಈ ಸ೦ಕಲ್ಪಕ್ಕೆ ಸಹಕರಿಸಿದ ವಿದ್ಯಾರ್ಥಿ ಸ್ವಯ೦ಸೇವಕರಿಗೆ ಹೆಚ್ಚಿನ ಕೃತಜ್ಞತೆಗಳು.

ಸ೦ಕಲ್ಪ ಮಾಡಿದವರೆಲ್ಲರ ಛಾಯಾಚಿತ್ರಗಳನ್ನು ತರಗತಿವಾರು ಈ ಕೆಳಗೆ ಕೊಡಲಾಗಿದೆ.
Class 8th A, English Medium

Class 9th, English Medium

Class 8th B, English Medium

Class 7th, Kannada medium

Class 6th, Kannada medium
English Version:

Thanks to the students, teachers, staff, head masters and the management council of the Shree Sharadamba Education and Rural Development Society, at Bhairumbe/ Sirsi, we could conduct the very first pledge drive at a school at this institution on 2-2-2019 with great success. In spite of the exam pressure, there was a sincere effort from all concerned to get as many pledges completed in short time available. Since this day was a  Saturday, we could not reach out to every class in time. It is hoped that the remaining students will be eventually included in this pledge, in which case, we will refine this report accordingly later.  

Through this event, we could mobilize a pledge of planting  69,199 trees. With this pledge included, we have mobilized pledges for a total of 1,13,54,523 trees so far, details of which is given in the document attached to the link below.
Thanks to all the stakeholders of Shree Sharadamba Education and Rural Development Society, Bhairumbe. Special thanks to Vasanth Master, the head master of English medium high school, Mahabala Keshava Hegde of Gadikai,and Narayana Hegde of Gadikai for the help in planning the event. We are grateful to all the students and class teachers for taking the pledge and helping to conduct the event in speedy manner.

Thanks to Pandeshwara Nagendra Karanth and wife Ramya Karanth for sponoring pledge certificates for this event.

Given the success of this first school level pledge event here, we now look forward to repeat this success in every possible school and college out there!

Thank you and Best Regards,

Nataraja Upadhya

Billion Trees and Beyond\
Paint Bengaluru Green and More! (ಬೆ೦ಗಳೂರಿಗೆ ಹಸಿರು ಓಕುಳಿ!) 

Comments

Popular posts from this blog

Plantation Drive at Sridhara Sri Gudda Ashram, Bengaluru - 50 Mexican Sunflower plantations on Feb 10, 2019 (Episode # 789 - # 838)

Know Your Spinach! - 38 varieties and still counting!

Kiran Pattar, growing exotic fruit forest on his terrace garden endorses our movement with 40 trees (Episode # 691 -730)