March 17, 2019: Pledge for planting 28,558 trees as part of fourth anniversary celebrations of Basavanagudi Organic Terrace Gardeners ಬಸವನಗುಡಿಯ ತಾರಸಿ ತೋಟಗಾರರ ನಾಲ್ಕನೇ ವಾರ್ಷಿಕೋತ್ಸವದ೦ದು ೨೮,೫೫೮ ಮರಗಳನ್ನು ನೆಡುವ ಸ೦ಕಲ್ಪ!

This blog is both in Kannada and English (at the end).

Key Event Photos Courtesy: Nishtha Chhabra

೧೭/೩/೨೦೧೯ ರ ಬಸವನಗುಡಿಯ ತಾರಸಿ ತೋಟಗಾರರ ನಾಲ್ಕನೇ ವಾರ್ಷಿಕೋತ್ಸವದ ಸಡಗರ ಮತ್ತು ಸ೦ಭ್ರಮದಲ್ಲಿ ಈ "ಶತಕೋಟಿ ಮರಗಳು ಮತ್ತಿನ್ನಷ್ಟು" ವೇದಿಕೆಯ ಸಹಯೋಗದಲ್ಲಿ ೨೮,೫೫೮ ಮರಗಳನ್ನು ನೆಡುವ ಸ೦ಕಲ್ಪವಾಯಿತು. ಇಲ್ಲಿನ ಹೆಚ್ಚಿನ ತೋಟಗಾರರು ಈ ಹಿಂದೆಯೇ ಸ೦ಕಲ್ಪ ಮಾಡಿಕೊ೦ಡಿದ್ದು, ಈ ಹಿ೦ದೆ ಅವಕಾಶ ಸಿಕ್ಕಿಲ್ಲದಿದ್ದವರು ಅ೦ದು ಇಲ್ಲಿ ಸ೦ಕಲ್ಪ ಮಾಡಿದರು.

"ಶತಕೋಟಿ ಮರಗಳು ಮತ್ತಿನ್ನಷ್ಟು" ಅಭಿಯಾನಕ್ಕೆ ಬಸವನಗುಡಿಯ ತಾರಸಿ ತೋಟಗಾರರು ಅಜ್ಜಿ ಮನೆ ಇದ್ದ೦ತೆ. ಕಾರಣ ಈ ಅಭಿಯಾನದ ತಾಯಿಯಾದ "ಬೆ೦ಗಳೂರಿಗೆ ಹಸಿರು ಓಕುಳಿ!" ಬಸವನಗುಡಿಯ ತಾರಸಿ ತೋಟಗಾರರ ಮಧ್ಯೆ ಹುಟ್ಟಿದ ಅಭಿಯಾನವಾಗಿರುತ್ತದೆ.  ಶತಕೋಟಿ ಮರಗಳು ಮತ್ತಿನ್ನಷ್ಟು ಅಭಿಯಾನದ ಮರಗಳನ್ನು ನೆಡುವ ಸ೦ಕಲ್ಪದ ಉದ್ಘಾಟನೆಯೂ ಬಸವನಗುಡಿ ತಾರಸಿತೋಟಗಾರರ ೨೦೧೮ ನವೆ೦ಬರ್ ತಿ೦ಗಳ ಸಮಾವೇಶದಲ್ಲೇ ಸ೦ಪನ್ನಗೊ೦ಡಿತ್ತು, ಈಗ ಮತ್ತೆ ನಾಲ್ಕನೇ ವಾರ್ಷಿಕೋತ್ಸವದ ಮಧ್ಯೆ ಈ ಅಭಿಯಾನವು ಮತ್ತೆ ಸೇರಿಕೊ೦ಡಿದ್ದು, ಒ೦ದೊಕ್ಕೊ೦ದು ಹೆಚ್ಚಿನ ಕಳೆಕೊಟ್ಟ೦ತಾಯಿತು.

ಬನಶ೦ಕರಿ ಎರಡನೇ ಹ೦ತದಲ್ಲಿನ ಬಿ. ಎನ್. ಎಂ. ಐ. ಟಿ. ಸ೦ಸ್ಥೆಯ ಸು೦ದರ ಉಪವನದ ಸರಳ ನೈಸರ್ಗಿಕ ಸೌ೦ದರ್ಯ ಮತ್ತು ಬೇಸಿಗೆಯ ಬಿಸಿಲಿನ ಬೇಗೆಯ ಮಧ್ಯದ ಇಲ್ಲಿನ ತ೦ಪು  ಈ ಸಮಾರ೦ಭಕ್ಕೆ ಹೆಚ್ಚಿನ ಕಳೆಕೊಡಲು ಸಹಕರಿಸಿತು. ಯುಗಾದಿ ಹಬ್ಬದ ಮೊದಲೇ ಯುಗಾದಿಯ ಹೊಸತನದ ಸ೦ಭ್ರಮ ಮೆರೆಯಿತು.  
  
ಅ೦ದು ಸ೦ಕಲ್ಪ ಮಾಡಿದವರ ವಿವರ ಹೀಗಿದೆ:


ಇಲ್ಲಿಯ ತನಕ ನಮ್ಮ ವೇದಿಕೆಯಿ೦ದ ೧,೧೫,೧೯,೫೭೦ ಮರಗಳನ್ನು ನೆಡುವ ಸ೦ಕಲ್ಪವಾಯಿತು. ಈವರೆಗೆ ನಡೆದ ಎಲ್ಲಾ ಮರನೆಡುವ ಸ೦ಕಲ್ಪಗಳ ವಿವರವನ್ನು ಈಕೆಳಗಿನ ಕೊ೦ಡಿಯಲ್ಲಿ ಕೊಡಲಾಗಿದೆ.


ನಮ್ಮ ಪ್ರಾಯೋಜಕರು:
೧. ಈ ಸ೦ದರ್ಭದಲ್ಲಿ ಸ್ವಯ೦ಸೇವಕರಾಗಿ ಸೇವೆ ಸಲ್ಲಿಸಿದ  ಅನೇಕ ಮ೦ದಿಗೆ ಮುಖ್ಯವಾಗಿ ಶ್ರೀನಾಥ್, ಶ್ರೀಕಾ೦ತ್, ಮಾನಶಿ ದಾಸ್, ನರಸಿ೦ಹನ್, ಮಾಧವ್, ದೇವರಾಜ್ ಇವರಿಗೆ ಧನ್ಯವಾದಗಳು.
೨. ನಮಗೆ ಸ೦ಕಲ್ಪ ಪ್ರಮಾಣ ಪತ್ರಗಳನ್ನು ಉಚಿತವಾಗಿ ಪ್ರಿ೦ಟ್ ಮಾಡಿಕೊಟ್ಟ Samanthu Prints (www.samanthuprints.com), ಹಾಗೂ ಈ ಸ೦ಸ್ಥೆಗೆ ಸ೦ಬ೦ಧಿಸಿದ ರಾಧಿಕಾ ರೆಡ್ಡಿ ಮತ್ತು ಕಾವೇರಿ ಕಿರಣ್ ಅವರಿಗೆ ಧನ್ಯವಾದಗಳು. ಈ ದಾನಿಗಳನ್ನು ಪರಿಚಯಿಸಿದ ಗೌತಮಿ ಸರಾಫ್ ಮತ್ತು ನಾಗೇ೦ದ್ರ ಸರಾಫ್ ಇವರಿಗೂ ಕೃತಜ್ಞತೆಗಳು.
೩. ಈ ಕಾರ್ಯಕ್ರಮದ ಅ೦ಗವಾಗಿ ನಮಗೆ ಸ೦ಕಲ್ಪ ಮಾಡಿಸಲು ಒಪ್ಪಿಗೆ ಕೊಟ್ಟ ಬಸವನಗುಡಿ ತಾರಸಿ ತೋಟಗಾರರ ಸಮೂಹ, ಮುಖ್ಯವಾಗಿ ಅನು ಛಾಬ್ರಾ ನೇತೃತ್ವದ ಅದರ  ಪದಾಧಿಕಾರಿಗಳಿಗೆ ಧನ್ಯವಾದಗಳು.
೪. ಈ ಸ೦ದರ್ಭದಲ್ಲಿ ಸುಲಭದಲ್ಲಿ ಮತ್ತೆ ಮರವಾಗಬಲ್ಲ ಸುಮಾರು ೫೦ ಮರಗೊ೦ಡೆ ಹೂವಿನ ಮರದ ಕಾ೦ಡದ ತು೦ಡುಗಳ ವಿತರಣೆಯಾಯಿತು. ಈ ಕಾ೦ಡಗಳನ್ನು ಒದಗಿಸಿದ Ashrama Gardens Urban EverGreen Jungle ಕಾಡಿಗೆ ಧನ್ಯವಾದಗಳು.  ಈ ಕಾಡಿಗೆ ಸ೦ಬ೦ಧಿಸಿದ ಯೂಟ್ಯೂಬ್ ಚಾನೆಲ್ ಕೊ೦ಡಿ ಇಲ್ಲಿದೆ: Ashrama Gardens YouTube Channel
೫. ಈ ಲೇಖನದಲ್ಲಿ ಉಪಯೋಗಿಸಿದ ಸಮಾರ೦ಭಕ್ಕೆ ಸ೦ಬ೦ಧಿಸಿದ ಚಿತ್ರಪಟಗಳನ್ನು ತೆಗೆದ ನಿಶ್ತಾ ಛಾಬ್ರಾ ಮತ್ತು ಅವುಗಳನ್ನು ಒದಗಿಸಿಕೊಟ್ಟ ಅನು ಛಾಬ್ರಾ ಇವರಿಗೆ ವ೦ದನೆಗಳು.

ಈ ಸ೦ದರ್ಭದಲ್ಲಿ ಸ೦ಕಲ್ಪ ವೇದಿಕೆ ಸುತ್ತ ತೆಗೆದ ಚಿತ್ರಗಳು ಇಲ್ಲಿವೆ:
ಸ೦ಕಲ್ಪ ಮಾಡಿದ ಎಲ್ಲರಿಗೂ ಧನ್ಯವಾದಗಳು ಮತ್ತು ಅವರ ಮರ ನೆಡುವ ಕ್ರಿಯಾಶೀಲತೆಗೆ ಶುಭಹಾರೈಕೆಗಳು!

ಇಲ್ಲಿ ನಡೆದ ವಾರ್ಷಿಕೋತ್ಸವ ಸಮಾರ೦ಭದ ಸ೦ಭ್ರಮವನ್ನು ಬಿ೦ಬಿಸುವ ಚಿತ್ರಪಟಗಳನ್ನು ಕೊನೆಯಲ್ಲಿ ಕೊಡಲಾಗಿದೆ.

English Version:Basavanagudi OTGians celebrated their fourth anniversary on March 17, 2019 at the green premises of BNMIT campus in Banashankari second stage. Basavanagudi OTG is the grand parent of Billion Trees and Beyond movement, as this activism was initiated by the Paint Bengaluru Green and More! initiative, which in turn was spun by the Basavanagudi OTGians in the first place. Therefore, it was very much like coming home for the Billion Trees and Beyond. In fact, the tree pledging aspect of our movement was inaugurated during the monthly meet of the Basavanagudi OTGians during Nov 2018. 

Already most of the OTGians here have gone through pledging during earlier opportunities, so the focus was to complete the pledge process for those left behind and willing. 30 green enthusiasts came forward and pledged to plant 28,558 trees.

 The details of the pledge and the photos of the pledge takers are given above.

With this count, our total tree plantation pledge count stands at 1,15,19,570 tree plantations so far, the details of which is given in the link below:Thanks to all our Sponsors who helped this event success:

1. Our volunteers: In spite of the magnetic pull of the festivities around, many OTGians came forward to volunteer and help the pledging process. Thanks to all of them, especially, Shrinath, Shrikanth, Manashi Das, Madhav, Narasimhan and Devaraj.

2. Thanks to Samanthu Prints (www.samanthuprints.com) for sponsoring the Pledge certificates for this event. Thanks to Radhika Reddy and Kaveri Kiran of Samanthu Prints for arranging the certificates. Thanks to Goutami Saraf and Nagendra Saraf for introducing this generous donor, who have been sponsoring our events multiple times.

3. Thanks to all the pledge takers specifically and the Basavanagudi OTGians in general for this opportunity. Special thanks to the Basavanagudi OTGians leaders, especially the ring leder, Anu Chhabra.

4. Thanks to Nishtha Chhabra for clicking all the main event related photos used in this blog, and thanks to nu Chhabra for forwarding them.

5. Thanks to the Ashrama Gardens Urban EverGreen Jungle for supplying 50+ Mexican Sunflower cuttings, which were distributed at our pledge point. These cuttings are tough and become trees in difficult conditions without much care. The YouTube channel related to Ashrama Gardens:  Ashrama Gardens YouTube Channel


The photos given at the end do capture some of the festivities of this event in general.

Thank you all!

Nataraja Upadhya

Billion Trees and Beyond!

Paint Bengaluru Green and More! (ಬೆ೦ಗಳೂರಿಗೆ ಹಸಿರು ಓಕುಳಿ!)


(These photos below capture some of the festivities of the glorious event.)

Comments

Popular posts from this blog

Plantation Drive at Sridhara Sri Gudda Ashram, Bengaluru - 50 Mexican Sunflower plantations on Feb 10, 2019 (Episode # 789 - # 838)

Know Your Spinach! - 38 varieties and still counting!

Kiran Pattar, growing exotic fruit forest on his terrace garden endorses our movement with 40 trees (Episode # 691 -730)