ಫೆಬ್ರವರಿ ೨, ೨೦೨೦: "ಹಸಿರಿನ ಹರಿಕಾರರು" ಬಸವೇಶ್ವರನಗರದಲ್ಲಿ ನಡೆಸಿದ ಮೊದಲ ವಾರ್ಷಿಕೋತ್ಸವದಲ್ಲಿ ೩೬,೫೦೨ ಮರಗಳನ್ನು ನೆಡುವ ಸಂಕಲ್ಪ "Hasirina Harikaararu" OTGians pledged for planting 36,502 trees as part of their festivities during their first annual day celebration at Basaveshwaranagar


This blog is both in Kannada and English, English version is given later.

ಫೆಬ್ರವರಿ ೨, ೨೦೨೦ರ ಭಾನುವಾರದಂದು ಬಸವೇಶ್ವರನಗರದ ವಾಣಿ ಶಾಲಾ ವಥಾರದಲ್ಲಿ ಹಬ್ಬದ ವಾತಾವರಣವಿತ್ತು. "ಹಸಿರಿನ ಹರಿಕಾರರು" ಎಂಬ ಸಾವಯವ ತಾರಸಿ ತೋಟಗಾರರ ಸಮೂಹ ಮೊದಲ ವರ್ಷದಲ್ಲೇ  ಬೃಹತ್‌ ಆಗಿ ಬೆಳೆದು ಶಾಲೆಗಳನ್ನೂ ಸೇರಿಸಿಕೊಂಡು ಅನೇಕ ಚಟುವಟಿಕೆಗಳ ಸಾಧನೆಯನ್ನು ಮಾಡಿ ಗಳಿಸಿದ ಸಂತೋಷ, ತೃಪ್ತಿ, ಆತ್ಮ ವಿಶ್ವಾಸ ಹಾಗೂ ಸಂಘಟನಾಶಕ್ತಿಯ ಛಾಯೆಗಳೆಲ್ಲಾ ಈ ಕಾರ್ಯಕ್ರಮದಲ್ಲಿ ಆವರಿಸಿಕೊಂಡಿದ್ದವು. ಮರಗಳನ್ನು ನೆಡುವ ಸಂಕಲ್ಪ ಹೊರಡಿಸಲು ನಮಗೂ ಅವಕಾಶವಿತ್ತು. ೩೬,೫೦೨ ಮರಗಳನ್ನು ನೆಡುವ ಸಂಕಲ್ಪ ಹೊರಡಿಸುವ ಮೂಲಕವೂ ಹಸಿರಿನ ಹರಿಕಾರರು ಹೊಸ ಹರಿಕಾರಗಳನ್ನು ಬರೆಯುತ್ತಾ ಹೋಗುವತ್ತ  ಸಂಭ್ರಮಿಸಿದರು.

೨೩ ಫೆಬ್ರವರಿ ೨೦೨೦ರ ಭಾನುವಾರದಂದು ಊಟ ಫ್ರಾಮ್‌ ಯುವರ್‌ ತೋಟದವರ ಪ್ರಾಯೋಜಕತ್ವದಲ್ಲಿ ನಮ್ಮಿಂದ ಮತ್ತೆ ಮರಗಳನ್ನು ನೆಡುವ ಸಂಕಲ್ಪ ಯಜ್ಞ ನಡೆಯಲಿದೆ, ಅಲ್ಲಿ ನಮ್ಮೊಂದಿಗೆ ಸೇರಲು ಈ ಕಾರ್ಯಕ್ರಮದ ಮಾಹಿತಿಯನ್ನು ಕೆಳಗೆ ಕೊಡಲಾಗಿದೆ, ಬನ್ನಿ, ನಮ್ಮ ಮಳಿಗೆಯನ್ನೂ ಹುಡುಕಿಕೊಂಡು ಬನ್ನಿ! ಮತ್ತೆ ಮರವಾಗಬಲ್ಲ, ನಾವು ಉಚಿತವಾಗಿ ಹಂಚುವ ಮರಗೊಂಡೆ ಹೂವಿನ ಕಾಂಡದ ತುಂಡುಗಳನ್ನು ಪಡೆದು ಕೊಂಡುಹೋಗಿ.ಫೆಬ್ರವರಿ ೨ರಂದು  ನಮ್ಮೊಂದಿಗೆ ಸಂಕಲ್ಪ ಮಾಡಿದ ಹಸಿರಿನ ಹರಿಕಾರರ ವಿವರವನ್ನು ಈಕೆಳಗೆ ಕೊಡಲಾಗಿದೆ:


ಇಲ್ಲಿಯ ತನಕ ನಮ್ಮ ವೇದಿಕೆಯಿ೦ದ ಒಂದೂವರೆ ಕೋಟಿ ಮಿಕ್ಕಿದ ಮರಗಳನ್ನು ನೆಡುವ ಸ೦ಕಲ್ಪವಾಯಿತು. ಈವರೆಗೆ ನಡೆದ ಎಲ್ಲಾ ಮರನೆಡುವ ಸ೦ಕಲ್ಪಗಳ ವಿವರವನ್ನು ಈಕೆಳಗಿನ ಕೊ೦ಡಿಯಲ್ಲಿ ಕೊಡಲಾಗಿದೆ.


ಧನ್ಯವಾದಗಳು:

೧. ನಮಗೆ ಈ ಸ೦ಕಲ್ಪ ಯಜ್ಞವನ್ನು ನಡೆಸಲು ಅನುಮತಿ ಕೊಟ್ಟ ಹಸಿರಿನ ಹರಿಕಾರಾರಿಗೂ ಹಾಗೂ ವಾಣಿ ಶಾಲೆಯವರಿಗೂ ಮುಖ್ಯವಾಗಿ ಶ್ರೀ ರಾಮಕೃಷ್ಣ ಹಾಗೂ ಶ್ರೀ ಮಾಧವ ಅವರಿಗೂ ವ೦ದನೆಗಳು. 

. ಸಂಕಲ್ಪ ವಿವರಗಳನ್ನು ಪುಸ್ತಕದಿಂದ ಗಣಕಯಂತ್ರಕ್ಕೆ ವರ್ಗಾಯಿಸಲು ಶ್ರಮಿಸಿದ ತಾರಸಿ ತೋಟಗಾರ್ತಿ ಶ್ರೀಮತಿ ಉಷಾ ಅವರಿಗೆ ವಂದನೆಗಳು.
Usha


೪. ನಮಗೆ ಸ೦ಕಲ್ಪ ಪ್ರಮಾಣ ಪತ್ರಗಳನ್ನು ಪ್ರಾಯೋಜಿಸಿದ ನಟರಾಜ ಉಪಾಧ್ಯ ಅವರಿಗೆ ವ೦ದನೆಗಳು.

೬. ಈ ಸ೦ದರ್ಭದಲ್ಲಿ ಸುಲಭದಲ್ಲಿ ಮತ್ತೆ ಮರವಾಗಬಲ್ಲ ಸುಮಾರು ೩೦+ ಮರಗೊ೦ಡೆ ಹೂವಿನ ಮರದ ಕಾ೦ಡದ ತು೦ಡುಗಳ ಉಚಿತ ವಿತರಣೆ ಮಾಡಿದ ಡಾ. ಜಯಶೀಲಾ ದೀಪಕ್ ಅವರಿಗೆ ಧನ್ಯವಾದಗಳು.  
Dr. Jaisheela Deepak

ಈ ಸ೦ದರ್ಭದಲ್ಲಿ ಸ೦ಕಲ್ಪ ಮಾಡಿದ ಮಹನೀಯರ ಚಿತ್ರಗಳನ್ನು ಕೆಳಗೆ ಕೊಡಲಾಗಿದೆ. ಅವರೆಲ್ಲರಿಗೂ ಧನ್ಯವಾದಗಳು ಹಾಗೂ ಮರಗಳನ್ನು ನೆಡುತ್ತಾ ಹೋಗುವ ಅವರ ಬದುಕಿನದಾರಿಯ ಕುರಿತಾಗಿ ಅಭಿನಂದನೆಗಳು.

ವಂದನೆಗಳೊಂದಿಗೆ,

Nataraja Upadhya

Billion Trees and Beyond!

Paint Bengaluru Green and More! (ಬೆ೦ಗಳೂರಿಗೆ ಹಸಿರು ಓಕುಳಿ!)

(English Version:)

Hasirina Harikaararu, the OTGians from Basaveshwaranagara area had a very successful maiden year of their engagement and the festivities during their first anniversary celebrations on Feb 2, 2020 at Vani School, Basaveshwaranagar reflected their renewed energy and enthusiasm for more fruitful engagements in the future ahead. They sponsored our stall for collecting pledges to plant trees, and Hasirina Harikaararu collaborated to raise pledges to plant 36,502 trees.

The 34th OFYT is scheduled for Feb 23rd Sunday, the details of which are given in photos above. Please come to this event and visit to our stall and take pledge if not already done by you and your family/friends. Also collect the free Mexican Sunflower cuttings from our stall while the supplies last.

Our total tree plantation pledge count has crossed 1.5 Crore trees so far, the details of which are given in the link below:


Vote of Thanks:

1. Thanks to the group of Hasirina Harikaararu and  Vani School management for the opportunity given to us for raising pledges. Special thanks to Mr. Ramakrishna and Mr. Madhav, the tireless leaders behind this event.

2. Thanks to Smt. Usha Nilofer for entering all the pledge data from the note book to the excel spread sheet. This is a very painful work, needs lot of care either not to make a new mistake or correct a mistake already on the note book.


3. Thanks to Mr. Nataraja Upadhya for sponsoring the Pledge certificates for this event.


4. Thanks to Dr. Jaisheela Deepak for supplying 30+ Mexican Sunflower cuttings, which were distributed at our pledge point. These cuttings are tough and become trees in difficult conditions without much care. 


Details of the pledge are given above. Photos of the pledgees and the event photos are given below.  Thanks to all the pldgees for their bold initiative. We congratulate them for the chosen life style of planting trees through the rest of their life and wish them all the best in all their endeavors.  

More event photos at the end.

Thank you all!

Nataraja Upadhya

Billion Trees and Beyond!

Paint Bengaluru Green and More! (ಬೆ೦ಗಳೂರಿಗೆ ಹಸಿರು ಓಕುಳಿ!)

Photos of most of the pledge holders given below:

A few photos that do not fully do justice to the festivities of the event are given below:


Comments

Popular posts from this blog

Plantation Drive at Sridhara Sri Gudda Ashram, Bengaluru - 50 Mexican Sunflower plantations on Feb 10, 2019 (Episode # 789 - # 838)

Know Your Spinach! - 38 varieties and still counting!

Kiran Pattar, growing exotic fruit forest on his terrace garden endorses our movement with 40 trees (Episode # 691 -730)