ನಮ್ಮ ಕೈ ತೋಟ - ಗೀತಾ ಕುಂದಾಪುರ (Our Garden - Geetha Kundapur)


(English Translation Summary at the end)

ನಮ್ಮ ಕೈ ತೋಟ

ಬೆಂಗಳೂರಿನ ಉಳ್ಳಾಲದಲ್ಲಿದೆ ನಮ್ಮ ಮನೆ, ನಮ್ಮ ತೋಟ. ನಮ್ಮ ತೋಟ ಶುರು ಮಾಡಿ 8-9 ವರ್ಷಗಳಾಯಿತು. ಮೊದಲು ನೆಟ್ಟದ್ದು ಎರಡು ಮಾವಿನ ಗಿಡಗಳು, ಮತ್ತು ಒಂದು ಲಿಂಬೆಯ ಗಿಡ. ಮುಂದಿನ ಒಂದೆರಡು ವರ್ಷಗಳಲ್ಲಿ ಏಲಕ್ಕಿ ಬಾಳೆ, ಸಪೋಟ ನಟ್ಟೆವು. ಮೊದಲು ನಮ್ಮ ಚಿಕ್ಕ ತೋಟದಲ್ಲಿ ತರಕಾರಿಗಳಾದ ಬೀನ್ಸ್, ಕ್ಯಾರೆಟ್, ಮೂಲಂಗಿ, ಬೀಟರೂಟ್ ಬೀಜಗಳನ್ನು ಬಿತ್ತಿದೆವು, ಬಹುಶಃ ಮಣ್ಣಿನ ಗುಣವೋ, ಇಲ್ಲ ಗೊಬ್ಬರವನ್ನು ಹಾಕದ್ದರಿಂದಲೋ ತರಕಾರಿ ಅಷ್ಟು ಚೆನ್ನಾಗಿ ಬರಲಿಲ್ಲ. ತರಕಾರಿ ಬೆಳೆಯುವುದನ್ನು ನಿಲ್ಲಿಸಿ ಹಣ್ಣಿನ ಗಿಡಗಳನ್ನೇ ಹಾಕಿದೆವು. ಪೇರಳೆ, ದಾಳಿಂಬೆ, ನಕ್ಷತ್ರ ಹಣ್ಣು, ರೋಸ್ ಆಪಲ್, ನೇರಳೆ, ಲೀಚಿ, ಅವಕ್ಕಾಡೋ, ಕಿರು ನೆಲ್ಲಿ, ಹಲಸಿನ ಗಿಡಗಳನ್ನು ನಟ್ಟೆವು.

ಏಲಕ್ಕಿ ಬಾಳೆ ಸೊಂಪಾಗಿ ಬೆಳೆಯಿತು, ವರ್ಷಕ್ಕೆ 5-6 ಬಾಳೆ ಕೊನೆ ಸಿಗುತ್ತಿದೆ, ಪೇರಳೆ ಗಿಡದಲ್ಲಿ ಹಣ್ಣುಗಳಾದರೂ ಚಿಕ್ಕ ಮಕ್ಕಳ ಕಳ್ಳತನದಿಂದ ಬಚಾವಾಗುವುದು ಕಷ್ಟವಾಗುತ್ತಿದೆ. ತುಂಬಾ ಹಣ್ಣು ಕೊಟ್ಟ ದಾಳಿಂಬೆ ಗಿಡವೊಂದು ಎರಡು ವರ್ಷಗಳ ಕೆಳಗೆ ಇದ್ದಕ್ಕಿದ್ದಂತೆ ಸತ್ತುಹೋಯಿತು, ಅದಕ್ಕಾಗಿ ಮತ್ತೆರಡು ದಾಳಿಂಬೆ ಗಿಡಗಳನ್ನು ನಟ್ಟಿದ್ದೇವೆ. 2 ಮಾವಿನ ಗಿಡಗಳಲ್ಲಿ ಒಂದರಲ್ಲಿ ಚೆನ್ನಾಗಿ ಹಣ್ಣು ಬಿಡುತ್ತಿದ್ದು ಮತ್ತೊಂದು ಹಣ್ಣು ಬಿಡಲು ಕಂಜೂಸಿ ತೋರಿಸುತ್ತಿದೆ. ಯಾವ ತಕರಾರೂ ಇಲ್ಲದೆ ಹಣ್ಣು ಕೊಡುವ ಮರಗಳೆಂದರೆ ನಕ್ಷತ್ರ ಹಣ್ಣು, ರೋಸ್ ಆಪಲ್, ಕಿರು ನೆಲ್ಲಿ. ಮೊದಲು ಹಣ್ಣು ಕೊಡಲು ತಕರಾರು ತೆಗೆದ ಲಿಂಬೆ ಗಿಡ ಈಗ ಸಾಕಷ್ಟು ಹಣ್ಣು ಕೊಡುತ್ತಿದೆ.  ನಟ್ಟು ನಾಲ್ಕು ವರ್ಷವೂ ಆಗಿರದ ನೇರಳೆ, ಲೀಚಿ, ಅವಕ್ಕಾಡೋ, ಹಲಸು ಗಿಡಗಳ ಹಣ್ಣಿಗಾಗಿ ಇನ್ನೂ 3-4 ವರ್ಷಗಳಾದರೂ ಕಾಯಬೇಕು.

ಗಿಡಗಳಿಗೆ ನೀರು ಮತ್ತು ಹಸುವಿನ ಸೆಗಣಿ ಬಿಟ್ಟು ಬೇರೆನನ್ನೂ ಹಾಕುತ್ತಿಲ್ಲ. ತೋಟದ ಕೆಲಸವನ್ನು ನಾವೇ ಮಾಡುತ್ತಿದ್ದೇವೆ.
ಸಪೋಟದ ಮೂರು ಗಿಡಗಳಿದ್ದು ಗಿಡಗಳಲ್ಲಿ ದಂಡಿಯಾಗಿ ಹೂವಿದ್ದರೂ ಹಣ್ಣುಗಳು ಮಾತ್ರ ಇಲ್ಲವೆಂದೇ ಹೇಳಬಹುದು. ಇದು ಹಣ್ಣು ಬಿಡಲು ಏನು ಮಾಡಬೇಕೆಂದು ತಿಳಿಯುತ್ತಿಲ್ಲ.

ಇದಲ್ಲದೆ ನುಗ್ಗೆ, ಕೆಂಡ ಸಂಪಿಗೆ, ಪಾರಿಜಾತ, ಕೆಂಪು ದಾಸವಾಳ, ಕರಿಬೇವಿನ ಗಿಡಗಳೂ ಇವೆ. ನುಗ್ಗೆ ದಂಡಿಯಾಗಿ ಕಾಯಿ ಬಿಟ್ಟರೆ ಕೆಂಡ ಸಂಪಿಗೆ ಮತ್ತು ಪಾರಿಜಾತ ನಮ್ಮ ಅಕ್ಕಪಕ್ಕದ ಮನೆಯವರ ದೇವರ ಕೋಣೆಯನ್ನೂ ಸೇರುತ್ತಿದೆ. ಕರಿಬೇವಿಗೆ ಹುಳದ ಕಾಟ.

ಇವಿಷ್ಟು ನಮ್ಮ ತೋಟದ ಬಗ್ಗೆ.
ಸುರೇಂದ್ರ ಉಪಾಧ್ಯ, ಗೀತಾ ಕುಂದಾಪುರ
9538914550, 8073428184

English Translation Summary:

Geetha Kundapur and her husband Surendra Upadhya set out to start their home garden at Ullal, Bengaluru approx. 8-9 years back. They had challenges in growing vegetables on a regular basis, so they switched to the fruit trees.

Now they can boast of good collection of fruit trees: Mangoes, Lemon, Plantains, Guava, Pomegranate, Star Fruit, Rose Apple, Jamun, Litchi, Avacado, Amla (Kiru Nelli), Jackfruit, Drumstick, Champaka, Parijatha, Red Hibiscus, Curry Leaves Tree.. list goes on.

They are able to harvest plantains 5-6 times an year. Guava is collected by neighboring children, so they don't get any. They need to wait for couple of years for the regular harvests from Jamun,  Litchi, Jackfruit and Avacado trees but the rest are producing plenty on a regular basis.

Drumstick harvests are plenty. All the flowers are much sought after by the neighbors for their pooja needs. Curry Leaves tree is always infested by the butterfly worms, but that too is good for the environment.

Congratulations on this great effort and results, pls. keep it up, spread the green and the green message further!

Best Regards, Nataraja Upadhya
for Paint Bengaluru Green and More & Billion Trees and Beyond

------------

If you like to showcase your garden on this blog, pls send the writeup with photos to: nupadhya@gmail.com or whatsapp to 9632824391.

Comments

Popular posts from this blog

Plantation Drive at Sridhara Sri Gudda Ashram, Bengaluru - 50 Mexican Sunflower plantations on Feb 10, 2019 (Episode # 789 - # 838)

Know Your Spinach! - 38 varieties and still counting!

Kiran Pattar, growing exotic fruit forest on his terrace garden endorses our movement with 40 trees (Episode # 691 -730)